ಕಾಳಿದಾಸನ ಮೇಘದೂತಮ್ ಒಂದು ಚರ್ಚೆ
12 Jun 2010 Leave a Comment
ಕವಿಕುಲಗುರು ಕಾಳಿದಾಸ ವಿರಚಿತ
ಮೇಘಸಂದೇಶಂ ಅಥವಾ ಮೇಘದೂತಮ್
ಭಾಗ-೧ ಪೂರ್ವ ಮೇಘ
ಪೀಠಿಕೆ
ಕಾಳಿದಾಸನ ಪ್ರಸಿದ್ಧ ಖಂಡಕಾವ್ಯವಾದ ಮೇಘದೂದವನ್ನು ಕುರಿತಂತೆ, ಈ ಕಾವ್ಯವು (ಬಹು ಜನಪ್ರಿಯ ಓದುವಿಕೆಯಾದ) ಪ್ರೇಮಕಥೆಯ ಉದ್ದೇಶವನ್ನೊಳಗೊಂಡಿಲ್ಲ, ಬದಲಾಗಿ ಹವಾಮಾನ ಸರ್ವೇಕ್ಷಣಾಶಾಸ್ತ್ರರೀತ್ಯಾ ನಿರ್ವಚಿಸುದುದಾಗಿದೆ ಎಂದು ತಿಳಿಸಲು ಹೊರಟ ಓದು ಇದಾಗಿದೆ. ಕಾಳಿದಾಸನ ಈ ಚಿಂತನೆಯು ಅವನ ಕಾವ್ಯದ ಮೊದಲ ಪದ್ಯದಲ್ಲೇ ದ್ಯೋತಕವಾಗಿದೆ.
ಕಶ್ಚಿತ್ ಕಾನ್ತಾವಿರಹಗುರುಣಾ ಸ್ವಾಧಿಕಾರಾತ್ಪ್ರಮತ್ತಃ
ಶಾಪೇನಾಸ್ತಂಗಮಿತಮಹಿಮಾ ವರ್ಷಭೋಗ್ಯೇಣ ಭರ್ತುಃ।
ಯಕ್ಷಶ್ಚಕ್ರೇ ಜನಕತನಯಾಸ್ನಾನಪುಣ್ಯೋದಕೇಷು
ಸ್ನಿಗ್ಧಚ್ಛಾಯಾತರುಷು ವಸತಿಂ ರಾಮಗಿರ್ಯಾಶ್ರಮೇಷು॥೧.೧॥
ಕವಿಯು ಇಲ್ಲಿ ಕಥಾನಾಯಕನಾದ ಯಕ್ಷನ ಹೆಸರನ್ನೂ ಸಹ ಸೂಚಿಸದೇ, ಅವನನ್ನು ಯಾರೊ ಒಬ್ಬ (कश्चित्) ಎಂದು ತಿಳಿಸಿರುವುದಕ್ಕೆ, ಅವನ ಕಥೆಯನ್ನು ಉಪೇಕ್ಷಿಸಿರುವುದಕ್ಕೆ ಬಲವಾದ ಕಾರಣವಿರಲೇ ಬೇಕು. ನನ್ನ ಎಣಿಕೆ ಈ ಕಾವ್ಯವು ಯಕ್ಷನ ಕಥೆಯನ್ನು ಹೇಳಲುದ್ದೇಶಿತವಾಗಿಲ್ಲ ಎಂದೇ ಆಗಿದೆ. ಪೂರ್ವ ಕಥಾನಕದಿಂದ ಲಭ್ಯವಾಗುವ ಯಕ್ಷನ ಪತ್ನೀಮೋಹ ಹಾಗು ಅದರ ಅಮಲಿನಿಂದಾಗಿ ಒದಗಿದ ಶಾಪದ ಕಥೆಯನ್ನು ಒಂದಿನಿತೂ ವಿಸ್ತರಿಸದೇ ಒಂದೇ ಪದ್ಯದಲ್ಲಿ ಉಕ್ತಿಮಾತ್ರದಲ್ಲೇ ಹ್ರಸ್ವಗೊಳಿಸಿಬಿಟ್ಟಿದ್ದಾನೆ.
- स्वाधिकारात्प्रमत्तः ತನಗಿದ್ದ ಅಧಿಕಾರದ ಅಮಲಿನಿಂದಾಗಿ (ದುರುಪಯೋಗಗೊಳಿಸಿಕೊಂಡ ಕಾರಣ)
- भर्तुः शापेनास्तंगमितमहिमा (ರಾಜ ಕುಬೇರನಿಂದ ಶಾಪಗ್ರಸ್ತನಾಗಿ) ಆ ಶಾಪದಿಂದ ತನ್ನ ಮಹಿಮೆಯನ್ನು (ಮಾಯಾಪ್ರಭೆಯನ್ನು) ಕಳೆದುಕೊಂಡು
- कान्ता विरहगुरुणा ಕಾನ್ತೆಯಿಂದ ವಿರಹಿತನಾದ,
ಎಂಬುದಾಗಿ ಮೂರು ವಿಶೇಷಣಮಾತ್ರದಿಂದ
कश्छित् ಯಾರೋ ಒಬ್ಬ
यक्षः ಯಕ್ಷನು
वसतिं चक्रे ವಾಸಮಾಡಿದನು.
ಎಂಬುದಾಗಿ ಹಿನ್ನೆಲೆಯ ಕಥಾಸಹಾಯವನ್ನು ಪಡೆದು,
- जनकतनयास्नानपुण्योदकेषु ಸೀತೆಯು ಸ್ನಾನಮಾಡಿ ಪಾವನವಾದ ಕೆರೆಕೊಳಗಳಿಂದ ತುಂಬಿದ,
- स्निग्धच्छायातरुषु ತಂಪಾದ ನೆರಳುಗಳಿಂದ ತುಂಬಿರುವ,
- रामगिर्याश्रमेषु ರಾಮಗಿರಿಯ ಆಶ್ರಮಗಳಲ್ಲಿ ಎಂಬುದಾಗಿ ತನ್ನ ಕಾವ್ಯದ ವಸ್ತುವಿವರಣೆಯು ಮೊದಲಾಗುವ ಕ್ಷೇತ್ರವನ್ನು ಗುರುತಿಸಿಕೊಂಡು ಪ್ರಾರಂಭಿಸುತ್ತಾನೆ.
ಇಲ್ಲಿ ಗಮನಿಸಬೇಕಾದ ಮುಖ್ಯವಾದ ಸಂಗತಿ ಎಂದರೆ, ಯಕ್ಷನ ಸ್ವಸ್ಥಾನವಾದ ಅಲಕಾಪುರಿಯನ್ನು ಮುಂದಾಗಿ ಹೆಸರಿಸದೇ, ಕುಬೇರನನ್ನು ಕಥೆಯ ಪಾತ್ರವಾಗಿ ಗುರುತಿಸಿಕೊಳ್ಳದೇ ರಾಮಗಿರಿಯ ಬಳಿಯಲ್ಲಿರುವ ಆಶ್ರಮಗಳಲ್ಲಿ ಎಂಬುದಾಗಿ ಕಾವ್ಯ ವಸ್ತು ಉದ್ದೇಶಿತ ಸ್ಥಾನವನ್ನು ನಿಖರವಾಗಿ ಗುರುತಿಸಿ ತನ್ನ ಕಾವ್ಯದ ವರ್ಣನೆಯ ಕೇಂದ್ರಬಿಂದುವನ್ನು ಸ್ಪಷ್ಟಪಡಿಸಿದ್ದಾನೆ. ಕವಿಯು ಇಲ್ಲಿ ಬಳಸಿದ (कश्चित् यक्षः) ನಾಮವಾಚಕದಲ್ಲಿ ಸ್ಪಷ್ಟತೆಯನ್ನು ಕೊಡದೆ, (वसतिं)ಕ್ರಿಯಾವಾಚಕದಲ್ಲಿ (रामगिर्याश्रमेषु) ನಿಖರತೆಯನ್ನು ಸಾಧಿಸಿರುವುದು ನನಗೆ ಅನ್ಯ ಮಾರ್ಗದಲ್ಲಿ ವಿವೇಚಿಸಲು ಪ್ರೇರೇಪಿಸಿದೆ. ಹಾಗಾಗಿ ನನ್ನ ಆಲೋಚನೆಯಲ್ಲಿ ಈ ಕಾವ್ಯವು ಮನುಷ್ಯ ಪಾತ್ರವಿವೇಚನೆಯಿಂದೊದಗುವ ಭಾವೋದ್ವೇಗಸ್ಫುರಣ ನಿರ್ವಚನ ಕಥಾಮಾತ್ರವಲ್ಲ, ಮಿಗಿಲಾಗಿ ಸಮಯದ ಹೊರಳಿನಲ್ಲಿ ಸಾಧ್ಯವಾಗುವ ಪ್ರಕೃತಿಯೊಂದಿಗೆ ಮಾನವನ ಭಾವಪ್ರೇಷಣ ಸಾಧಕ ಸಂವಹನ ಸಂಬಂಧವನ್ನು ನಿರ್ವಚಿಸುವುದೇ ಎಂಬುದಾಗಿದೆ.
ಇಲ್ಲಿ ಇನ್ನೊಂದು ಪ್ರಮುಖವಾದ ಶಬ್ದದ ಬಗೆಗೆ ನಾವು ಗಮನ ಹರಿಸಬೇಕಾದುದು वर्षभोग्येण ಒಂದು ವರ್ಷ (ಶಾಪವನ್ನು) ಅನುಭವಿಸಬೇಕಾದ ಎಂಬ ಈ ಸಮಯವಾಚಕ ಶಬ್ದ ನಮಗೆ ಋತು-ಚಕ್ರದ ಕಲ್ಪನೆಯನ್ನು ಕೊಡುವುದರಲ್ಲಿ ಯಶಸ್ವಿಯಾಗುತ್ತದೆ. ಮುಂದಿನ ಪದ್ಯಗಳಲ್ಲಿ नीत्वा मासान् (ಎಂಟು) ತಿಂಗಳುಗಳು ಕಳೆದು ಎಂದು ಹೇಳಿರುವುದೂ ಸಹ ಋತುವಿನ ನಿಷ್ಕೃಷ್ಟ ನಡೆಯನ್ನು ಸೂಚಿಸುತ್ತದೆ. ಬಹುಷಃ ಅಲಕೆಯಿಂದ ರಾಮಗಿರ್ಯಾಶ್ರಮಕ್ಕೆ ಬರಲು 4 ತಿಂಗಳು ರಾಮಗಿರ್ಯಾಶ್ರಮದಲ್ಲಿ ತಂಗಿದ್ದು 4 ತಿಂಗಳು, ಹಿಂತಿರುಗಿ ಹೋಗಲು 4 ತಿಂಗಳು ಎಂಬ ಸಮಯ ವಿಭಜನೆಯು ಆರು ಋತುಗಳನ್ನು ಮೂರು ಹಂತಗಳಲ್ಲಿ, ಮೂರು ಬಗೆಯ ಪ್ರಕ್ರಿಯೆಗಳಲ್ಲಿ (1-ದೂರ ಪ್ರಯಾಣ, 2-ವಾಸ್ತವ್ಯ, 3-ಹಿಂದಿರುಗುವಿಕೆ) ಕಳೆದ ಎಂಬರ್ಥವನ್ನು ಹೊಳೆಯಿಸುತ್ತದೆ. ಈ ಕಾವ್ಯದ ಸಂಪೂರ್ಣ ನಡೆಯು ನಾಯಕನ ಮೊದಲೆರಡು ಪ್ರಕ್ರಿಯೆಗಳನ್ನು ಮುಗಿಸಿದ ನಂತರ, ಅವನ ಮೂರನೆಯ ಪ್ರಕ್ರಿಯೆ ಪ್ರಾರಂಭಕ್ಕೆ ಮುನ್ನಾ ಸಮಯವನ್ನು ಆವರಿಸಿಕೊಳ್ಳುತ್ತದೆ. ಈ ನಡುವಿನ ಕಾಲದ ಕಥೆಯು ಪ್ರೇಮಕಥೆಯ ಹಾಸುಹೊಕ್ಕಿನಲ್ಲಿ ಬಿಡಿಸಿದ ವರ್ಷಕಾಲದ ಸಹಜ ವಿಸ್ಮಯದ ವರ್ಣಚಿತ್ರಕವಾಗಿದೆ ಎಂಬುದು ನನ್ನ ಈ ಓದಿನ ತಿಳಿವಳಿಕೆಯಾಗಿದೆ.
ಕೇಂದ್ರ ಹವಾಮಾನ ಸರ್ವೇಕ್ಷಣಾ ಇಲಾಖೆಯು ವರ್ಷದುದ್ದಕ್ಕೂ ಹವಾಮಾನ ವೈಪರೀತ್ಯಗಳ ಕಾಲಕಾಲದ ಅಂದಾಜು ಗುರುತುಗಳನ್ನು ದಾಖಲಿಸಿ ಸಾರ್ವಜನಿಕ ತಿಳಿವಳಿಕೆಯನ್ನು ನೀಡುತ್ತದೆ. ಪ್ರತಿ ವರ್ಷ ಮುಂಗಾರು ಮಳೆಯು ಪ್ರಾರಂಭವಾಗುವ, ಮಳೆ ಗಾಳಿಗಳ ವೈಪರೀತ್ಯಗಳ – ಆಗುಹೋಗುಗಳ ನಿಖರ ಚಿತ್ರಗಳನ್ನು ಇನ್ಸಾಟ್ ಸೆಟೆಲೈಟ್ ಮೂಲಕ http://www.mausam.gov.in/WEBIMD/ ಮತ್ತು http://www.imd.gov.in/main_new.htm
This slideshow requires JavaScript.
ಈ ಅಂತರ್ಜಾಲ ತಾಣಗಳ ಮೂಲಕ ನಿರಂತರವಾಗಿ ಕೊಡುತ್ತದೆ. ಇಲ್ಲಿ ಪ್ರಕಟಿತವಾಗುವ ಸೆಟಲೈಟ್ ನಿಂದ ತೆಗೆದು ರವಾನಿಸಲಾದ ಚಿತ್ರಗಳನ್ನು ರಾಷ್ಟ್ರದ ಪ್ರಮುಖ ದಿನಪತ್ರಿಕೆಗಳು ನಿಯತವಾಗಿ ಹವಾಮಾನ ಸುದ್ದಿಯೊಡನೆ ಮುದ್ರಿಸಿ ಪ್ರಕಟಿಸುತ್ತವೆ. ಮುಂಗಾರು ಮಳೆಯ ಪ್ರಾರಂಭ, ಭಾರತ ಭೂಮಿಯೊಳಗಿನ ಪ್ರವೇಶ, ಅದರ ಆವೇಶ ಮಳೆ, ಮಿಂಚು, ಗುಡುಗು, ಗಾಳಿಗಳ ಅಂದಾಜು ಸಾಧ್ಯತೆಗಳನ್ನು ಕಾಲ ಕಾಲಕ್ಕೆ ದೊರಕಿಸಿಕೊಡುತ್ತದೆ. ಇವುಗಳನ್ನು ನಿರಂತರವಾಗಿ ಹಲವು ವರ್ಷಗಳ ಕಾಲ ಅಧ್ಯಯನ ಮಾಡಿದ ನನಗೆ ಒಂದು ಸಂಗತಿ ಸ್ಪಷ್ಟವಾಗಿ ತಿಳಿದು ಬಂದಿದೆ. ಉತ್ತರ-ಪೂರ್ವದಿಂದ ದಕ್ಷಿಣದಿಕ್ಕಿನಲ್ಲಿ ಧಾವಿಸುವ ಮುಂಗಾರು ಮೋಡಗಳು ಹಿಂದೂ ಮಹಾಸಾಗರದಲ್ಲಿ ತ್ರಿಕೋಣಾಕೃತಿಯಲ್ಲಿರುವ ಪಾಕ್ ಜಲಸಂಧಿಯ ಭಾರತ ಭೂಮಿಯನ್ನು ಬಳಸಿ ಉತ್ತರಾಭಿಮುಖನಾಗಿ ಕೂಡಲೇ ನಾಟಕೀಯವಾಗಿ ಕೇರಳದ ಮೌನ ಕಣಿವೆಯಲ್ಲಿ ಮತ್ತೆ ಪೂರ್ವಾಭಿಮುಖನಾಗಿ ತಿರುಗಿದ ನೀರು ತುಂಬಿಕೊಂಡ ಭಾರವಾದ ಮೋಡಗಳು ಪಶ್ಚಿಮ ಘಟ್ಟಗಳಿಗೆ ಬಡಿದು (ಅನಿವಾರ್ಯವಾಗಿ) ಮತ್ತೆ ಉತ್ತರಾಭಿಮುಖನಾಗಿ ಬಳ್ಳಾರಿ, ಗುಲ್ಬರ್ಗಾ, ಹೈದರಬಾದ್, ನಾಸಿಕ್, ರಾಮ್ ಟೇಕ್ (ರಾಮಗಿರಿ) ಮೂಲಕ ಮಧ್ಯ ಭಾರತದ ವಿಂಧ್ಯ ಪರ್ವತದ ಪೂರ್ವ ಭಾಗದಲ್ಲಿನ ಆಮ್ರಕೂಟ (ಅಮರಕಂಟಕ್) ವನ್ನು ಬಳಸಿ ಮತ್ತೆ (ಅನಿವಾರ್ಯವಾಗಿ) ವಿಂಧ್ಯ ಪರ್ವತದ ದಕ್ಷಿಣ ಮುಖದಲ್ಲಿ ಪಶ್ಚಿಮಾಭಿಮುಖನಾಗಿ ನರ್ಮದೆಯಗುಂಟ ಸಾಗಿ ವಿದಿಶಾ, ವಿದರ್ಭ, ಅವಂತೀ ಪ್ರದೇಶಗಳನ್ನು ದಾಟಿ ಮತ್ತೆ ಕೊಂಚ ದಕ್ಷಿಣದಲ್ಲಿರುವ ಉಜ್ಜಯಿನಿಯನ್ನು ಬಳಸಿ ತಿರುಗಿ ಉತ್ತರಾಭಿಮುಖನಾಗಿ ಆಗ್ರಾ, ಲಖನೌ, ಹರ್ದ್ವಾರ್, ಕನಖಲ ಮೂಲಕ ಅಲಕೆಯನ್ನು ಸೇರುವ ಪರಿಯನ್ನು ಗಮನಿಸಿದ್ದೇನೆ. ನನ್ನ ಈ ಅಧ್ಯಯನಕ್ಕೆ ಒತ್ತಾಸೆಯಾಗಿ ಕೇಂದ್ರ ಹವಾಮಾನ ಸರ್ವೇಕ್ಷಣಾ ಇಲಾಖೆಯು ಪ್ರಕತಿಸುವ ಸೆಟಲೈಟ್ ಚಿತ್ರಗಳು ಉತ್ತಮ ಪುರಾವೆಯಾಗುತ್ತವೆ. ಆದಾಗ್ಯೂ ಮುಂಗಾರಿನಲ್ಲಿ ತೀರ ಎತ್ತರದಲ್ಲಿ ಚಲಿಸುವ ಹಗುರವಾದ ಮೋಡಗಳು ವಿದಿಶೆಯ ವೇತ್ರವತೀ ನದಿಯ ಉತ್ತರದಲ್ಲಿ ವಿಂಧ್ಯೆಯನ್ನು ಹಾರಿ ಉತ್ತರಪ್ರದೇಶದತ್ತ ಹಾಯುವ ಸಂದರ್ಭಗಳು ಇಲ್ಲದಿಲ್ಲ. ಆದರೂ ಮೋಡಗಳ ಸಹಜ ನಡೆಯು ಈ ಮೇಲೆ ಗುರುತಿಸಿದುದಾಗಿದೆ.
ಬಹುಷಃ ಕಾಳಿದಾಸನು ಅಪಾರವಾಗಿ ಪ್ರಯಾಣ ಕೈಗೊಂಡವನೂ, ಭೂಮಿ ಆಕಾಶಗಳನ್ನು ಭಾವಪರವಶನಾಗುವ ವಿದ್ಯಾರ್ಥಿಯಂತೆ ನಿರುಕಿಸುತ್ತಾ, ನಿರಂತರವಾಗಿ ಪ್ರಕೃತಿ ಮತ್ತು ಮನುಷ್ಯ ಸಂಬಂಧಗಳು ಋತುಗಳ ಬದಲಾವಣೆಯ ಆಧಾರದಮೇಲೆ ಪ್ರಭಾವಿತವಾಗುವುದನ್ನು ಸೂಕ್ಷ್ಮವಾಗಿ ಗಮನಿಸಿದವನೂ, ಅವುಗಳನ್ನು ತನ್ನ ಕೃತಿಗಳಲ್ಲಿ ನಿರ್ವಂಚನೆಯಿಂದ ಚಿತ್ರಿಸಿದವನೂ ಆಗಿದ್ದಾನೆ ಎಂದೆನಿಸುತ್ತದೆ. ಭೂಮಿಯ ಮೇಲೆ ನಿಂತು ಆಕಾಶದಲ್ಲಿ ನಡೆಯುವ ಮೋಡಗಳ ನಾಟಕೀಯ ಪ್ರದರ್ಶನವನ್ನು ಆನಂದಿಸಿ, ಅವುಗಳ ನರ್ತನವನ್ನು ಕಾವ್ಯದ ಹೊದರಿನಲ್ಲಿ ನಮಗೆ ಉಣಬಡಿಸಿದ್ದಾನೆ. ಇಂದು ನಾವು ಈ ಮೆಲಿರುವ ಸೆಟೆಲೈಟ್ ಚಿತ್ರಗಳನ್ನು ಆಧರಿಸಿ ಅಧ್ಯಯನ ಮಾಡಹೊರಟರೆ ಕಾಳಿದಾಸನ ಅಧ್ಯಯನಶೀಲ ಮನಸ್ಸು, ಸೂಕ್ಷ್ಮ ದೃಷ್ಟಿ, ಕಂಡದ್ದನ್ನು ಭಾಷೆಯಲ್ಲಿ ಬರವಣಿಗೆಯಲ್ಲಿ ಅನುವಾದಿಸಿರುವ ರೀತಿ ಅನನ್ಯವಾಗಿದೆ.
कालिदास विरचितम् मेघदूतम् – खण्डकाव्यम्
02 Feb 2010 Leave a Comment
Meghadootam of Kalidasa (a new reading)
KALIDASA (the poet)
Kalidasa is a celebrated poet in Sanskrit and is most respected among poets in Sanskrit language. The History of classical Sanskrit Literature gives us the information that Kalidasa probably lived in 4th or 5th Century A.D., (some scholors also say that he may have lived before 1st Century B.C) contributed Two Mahakavyas (Raghuvamsham, Kumarasambhavam), Two Khandakavyas (Meghadootam, Ritusamharam), Three Dramas (Malavikagnimitram, vikramorvasheeyam, Abhijnana Shakuntalam).
WE HAVE BEEN TOLD
Meghadootam, also called as Megha Sandesham, is popularly known as a love story of some one Yaksha who was a servant in the court of Kubera. A story of a dereliction in duties severely punished rolled upon to us as a must know matter in reading this text. A character Yaksha with no specific name given, who is far away from his place as a result of punishment given by the king-wanting to send information to a Yakshi-his wife, who is there in Alaka the abode of Yakshas, that he will be returning soon.
MY QUESTIONS
- Why Yaksha and his wife Yakshi are not given a name?
- Why the story of the curse of Kubera is not discussed at length in the work. With this the separation element in the story will be gaining a strong logical reason.
MY READING
Journey of the Monsoon Clouds in the Indian sub-continent is always a fascinating factor to be watched. This journey repeats every year more or less in the same fashion. Purely a seasonal and a natural phenomena, it is the bestowyer of life for the people of India because India is a country of villages where agriculture is the way of life. This is the most reliable source of water from the sky to the land. The department of Meteorology releases forecast of monsoon every year. Every major daily news papers in our country publish the details of the weather of the day with a satellite picture of the Indian subcontinent showing the movements of the Clouds in the sky. Monsoon, Cyclone and other high drama in the sky is duly reported regularly. The waves coming from the north eastern quarters, moving south west region, and having a dramatic turn in the south west India enters Kerala, passes Karnataka, moving to Central India in between Eastern and Western Ghats. The first peak monsoon cloud touches is the peak in Ramtek (Ramagiryashrama) situated 65 k.m. to Nagpur in the north eastern part of Maharashtra. It moves to Amarkantak(Amrakoota) a place called as Narmada base situated west of Madhyapradesh South eastern part of Vindhya mountain and is a part of Dandakaranya. The cloud moves towards east along south face of Vindhya mountain range and turns towards Aravali range near Ujjain. That will be the western end of Vindhya mountain range. High peaks will not disturb the clouds any way, it is a natural course that clouds turns towards north. Going along western end of Vindhyas again cloud takes an eastern turn after crossing Ganga because of Himalayan mountain obstructs in the north. By this Cloud reaches Kailas Manas. There finishes the journey of Monsoon clouds on Indian subcontinent. The work seems to me to have more meteorological importance than the love story narrated. MY ENQUIRY(a new reading)
MY RESEARCH JOURNEY
I started doubting the fact that is being fed to us from old scholars that Ujjain must be the place of Kalidasa as he describes the town at length in the poem Meghadootam. My doubt was because in those lines poets emotional expression was missing and details speaks the culture and religious practices of the land which helps in understanding the fact that which influences the seasonal outburst of the people. Culture of the land is tuned by the seasonal changes, especially the contribution of the rain, because agriculture is the life source of Indian people.
…………..will be continued
Hello world!
02 Feb 2010 1 Comment
Welcome to WordPress.com. This is your first post. Edit or delete it and start blogging!